ಅನುವಾದ

ಹತಾಶೆಯಲ್ಲಿ ಕೂತನೊಬ್ಬ

ಹಿಂದಿ ಮೂಲ: ವಿನೋದ ಕುಮಾರ ಶುಕ್ಲಾ

ಕನ್ನಡಕ್ಕೆ: ಕಮಲಾಕರ ಕಡವೆ

ಹತಾಶೆಯಲ್ಲಿ ಕೂತಿದ್ದನೊಬ್ಬ ಅಪರಿಚಿತ ವ್ಯಕ್ತಿ

ಹತಾಶೆ ಎಂದರೇನೆಂದು ನಾ ಬಲ್ಲೆ

ಎಂದೇ, ಅವನ ಬಳಿ ಹೋಗಿ ನನ್ನ ಕೈ ಚಾಚಿದೆ

ನನ್ನ ಕೈ ಹಿಡಿದು ಆತ ಎದ್ದು ನಿಂತ

ನಾ ಯಾರೆಂದು ಅವನಿಗೆ ಗೊತ್ತೇ ಇರಲಿಲ್ಲ

ಆದರೆ, ಗೊತ್ತಿತ್ತು ಚಾಚಿದ್ದ ಕೈಯ ಅರ್ಥ

ನಾವು ಒಬ್ಬರಿನ್ನೊಬ್ಬರ ಜೊತೆಯಾಗಿ ನಡೆದೆವು

ಒಬ್ಬರಿಗಿನ್ನೊಬ್ಬರ ಗುರುತೇ ಇರಲಿಲ್ಲ

ಆದರೆ, ಗೊತ್ತಿತ್ತು ಜೊತೆಯಾಗಿ ನಡೆಯುವುದರ ಅರ್ಥ

**